ಲಿನ್ನೇಯಸ್‌ರವರ ಹೂವಿನ ಗಡಿಯಾರ ಎಂಬುದು ಕಾರ್ಲ್ ಲಿನ್ನೇಯಸ್‌ರವರು ಊಹಿಸಿದ ಉದ್ಯಾನ ಯೋಜನೆ. ಇದು ಹೂವುಗಳು ಅರಳುವ ಮತ್ತು ಮುದುಡುವ ಸಮಯವನ್ನಾಧರಿಸಿ ದಿನದ ನಿರ್ದಿಷ್ಟ ಸಮಯವನ್ನು ನಿಖರವಾಗಿ ಸೂಚಿಸುತ್ತದೆ. ಲಿನ್ನೇಯಸ್ ಅವರ ಆತ್ಮಚರಿತ್ರೆ ಟಿಪ್ಪಣಿಗಳ ಪ್ರಕಾರ, ಅವರು ೧೭೪೮ ರಲ್ಲಿ ಹೂವಿನ ಗಡಿಯಾರವನ್ನು ಕಂಡುಹಿಡಿದು ಅಭಿವೃದ್ಧಿಪಡಿಸಿದರು. ದಿನದ ನಿಗದಿತ ಸಮಯಗಳಲ್ಲಿ ತಮ್ಮ ಹೂವುಗಳನ್ನು ತೆರೆಯುವ ಅಥವಾ ಮುಚ್ಚುವ ಜಾತಿಯ ಸಸ್ಯಗಳಿವೆ ಎಂಬ ಅಂಶದ ಮೇಲೆ ಇದನ್ನು ನಿರ್ಮಿಸುತ್ತದೆ. ಅವರು ತಮ್ಮ ೧೭೫೧ ರ ಪ್ರಕಟಣೆಯಾದ ಫಿಲಾಸೊಫಿಯಾ ಬೊಟಾನಿಕಾದಲ್ಲಿ ಈ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ಹಾಗೂ ಇದನ್ನು ಜಾತಕ ಸಸ್ಯವರ್ಗ ('ಹೂವಿನ ಗಡಿಯಾರ') ಎಂದು ಕರೆದರು. ಕಾಲಾನಂತರದಲ್ಲಿ ಸಸ್ಯಗಳು ಹೇಗೆ ಬದಲಾದವು ಎಂಬುದರ ಕುರಿತು ಅವರ ಅವಲೋಕನಗಳನ್ನು ಹಲವಾರು ಪ್ರಕಟಣೆಗಳಲ್ಲಿ ಸಂಕ್ಷಿಪ್ತಗೊಳಿಸಲಾಗಿದೆ. ಕ್ಯಾಲೆಂಡರಿಯಮ್ ಫ್ಲೋರೇ (ಹೂವಿನ ಪಂಚಾಂಗ) ೧೭೫೫ ರಲ್ಲಿ ಪ್ರಕೃತಿ ಮತ್ತು ಸಸ್ಯಶಾಸ್ತ್ರೀಯ ಉದ್ಯಾನದಲ್ಲಿ ಕಾಲೋಚಿತ ಬದಲಾವಣೆಗಳನ್ನು ವಿವರಿಸುತ್ತದೆ. ಸೋಮ್ನಸ್ ಪ್ಲಾಂಟರಮ್ (ಸಸ್ಯಗಳ ನಿದ್ರೆ) ನಲ್ಲಿ, ವಿವಿಧ ಸಸ್ಯಗಳು ರಾತ್ರಿಯಲ್ಲಿ ನಿದ್ರೆಗೆ ಹೇಗೆ ಸಿದ್ಧವಾಗುತ್ತವೆ ಎಂಬುದನ್ನು ಅವರು ವಿವರಿಸುತ್ತಾರೆ. ಮತ್ತು ವೆರ್ನಾಟಿಯೊ ಆರ್ಬೋರಮ್‌ನಲ್ಲಿ ಅವರು ವಿವಿಧ ಮರಗಳು ಮತ್ತು ಪೊದೆಗಳಲ್ಲಿ ಎಲೆ-ಮೊಗ್ಗು ಸ್ಫೋಟಿಸುವ ಸಮಯದ ಬಗ್ಗೆ ವಿವರಣೆ ನೀಡುತ್ತಾರೆ. ಅವರು ಇಂತಹ ಉದ್ಯಾನವನ್ನು ಎಂದಿಗೂ ನೆಡದಿರಬಹುದು. ಆದರೆ ಈ ಕಲ್ಪನೆಯನ್ನು ೧೯ ನೇ ಶತಮಾನದ ಆರಂಭದಲ್ಲಿ ಹಲವಾರು ಸಸ್ಯಶಾಸ್ತ್ರೀಯ ಉದ್ಯಾನಗಳು ಪ್ರಯತ್ನಿಸಿದವು ಹಾಗೂ ಮಿಶ್ರ ಯಶಸ್ಸನ್ನು ಕಂಡವು. ಅನೇಕ ಸಸ್ಯಗಳು ಬಲವಾದ ಸಿರ್ಕಾಡಿಯನ್ ಲಯವನ್ನು ಪ್ರದರ್ಶಿಸುತ್ತವೆ (ಕ್ರೋನೋಬಯಾಲಜಿಯನ್ನು ಸಹ ನೋಡಿ) ಮತ್ತು ಕೆಲವು ಸಾಕಷ್ಟು ನಿಯಮಿತ ಸಮಯದಲ್ಲಿ ತೆರೆಯುವುದನ್ನು ಗಮನಿಸಲಾಗಿದೆ. ಆದರೆ, ಅಂತಹ ಗಡಿಯಾರದ ನಿಖರತೆ ಕಡಿಮೆಯಾಗುತ್ತದೆ. ಏಕೆಂದರೆ, ಹೂಬಿಡುವ ಸಮಯವು ಹವಾಮಾನ ಮತ್ತು ಕಾಲೋಚಿತ ಪರಿಣಾಮಗಳಿಂದ ಪ್ರಭಾವಿತವಾಗಿರುತ್ತದೆ. ಲಿನ್ನೇಯಸ್‌ರವರ್ ದಾಖಲಿಸಿದ ಹೂಬಿಡುವ ಸಮಯವು ಅಕ್ಷಾಂಶದ ಕಾರಣದಿಂದಾಗಿ ಹಗಲಿನ ವ್ಯತ್ಯಾಸಗಳಿಗೆ ಒಳಪಟ್ಟಿರುತ್ತದೆ: ಅವರ ಅಳತೆಗಳು ಉಪ್ಸಾಲಾದಲ್ಲಿ ಹೂಬಿಡುವ ಸಮಯವನ್ನು ಆಧರಿಸಿವೆ. ಎಂಬುದನ್ನು ಅಲ್ಲಿ ಅವರು ಕಲಿತರು ಮತ್ತು ವಿಶ್ವವಿದ್ಯಾಲಯ ಶಿಕ್ಷಣವನ್ನು ಪಡೆದರು. ಲಿನ್ನೇಯಸ್‌ರವರು ಬಳಸಲು ಸೂಚಿಸಲಾದ ಸಸ್ಯಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ. ಇದನ್ನು ದಾಖಲೆ ಮಾಡಿದ ತೆರೆಯುವ ಸಮಯದಿಂದ ಆದೇಶಿಸಲಾಗಿದ. "-" ಡೇಟಾ ಕಾಣೆಯಾಗಿದೆ ಎಂದು ಸೂಚಿಸುತ್ತದೆ. == ತಳಿರು ಕ್ರಿಯೆ ಮತ್ತು ತಳಿಗಳು == ಟ್ರಾಗಾಪೋಗನ್ ಪ್ರನ್ಥೆಸಿಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ಗೋಟ್ಸ್ ಬಿಯರ್ಡ್ ಎಂಬ ಆಡುಭಾಷೆಯ ಹೆಸರನ್ನೂ ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ಮೊದಲ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೩ ಗಂಟೆಗೆ ಅರಳುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೩ ಗಂಟೆಯೆಂದು ಹೇಳಬಹುದು. ಲಿಯಾಂಟೋಡನ್ ಇಸ್ಪೀಡಿಯಂ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ರಫ್ ಹಾಕ್ ಬಿಟ್ ಎಂಬ ಆಡುಭಾಷೆಯ ಹೆಸರನ್ನೂ ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ಎರಡನೆಯ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೪ ಗಂಟೆಗೆ ಅರಳುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೪ ಗಂಟೆಯೆಂದು ಹೇಳಬಹುದು. ಹೆಲ್ಮಿಂಥೋಥೆಕಾ ಎಖಿಯೋಡೆಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ಬ್ರಿಸ್ಟ್ಲೀ ಆಕ್ಸ್-ಟ್ಂಗ್ ಎಂಬ ಆಡುಭಾಷೆಯ ಹೆಸರನ್ನೂ ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ಮೂರನೆಯ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೪-೫ ಗಂಟೆಗೆ ಅರಳುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೪-೫ ಗಂಟೆಯೆಂದು ಹೇಳಬಹುದು. ಕಿಕೋರಿಯಂ ಇಂಟಿಬಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ಕಿಕೋರಿ ಎಂಬ ಆಡುಭಾಷೆಯ ಹೆಸರನ್ನೂ ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ನಾಲ್ಕನೆಯ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೪-೫ ಗಂಟೆಗೆ ಅರಳುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೪-೫ ಗಂಟೆಯೆಂದು ಹೇಳಬಹುದು. ಕ್ರೇಪಿಸ್ ಟೆಕ್ಟೋರಂ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ಹಾಕ್ಸ್ ಬಿಯರ್ಡ್ ಎಂಬ ಆಡುಭಾಷೆಯ ಹೆಸರನ್ನೂ ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ಐದನೆಯ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೪-೫ ಗಂಟೆಗೆ ಅರಳುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೪-೫ ಗಂಟೆಯೆಂದು ಹೇಳಬಹುದು. ರೈಚಾರ್ಡಿಯ ಟಿಂಗಿಟಾನ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ಫಾಲ್ಸ್ ಸೋವ್ ತಿಸ್ಸಿಲ್ ಎಂಬ ಆಡುಭಾಷೆಯ ಹೆಸರನ್ನು ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ಆರನೆಯ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೬ ಗಂಟೆಗೆ ಅರಳಿ ೧೦ ಗಂಟೆಗೆ ಬಾಡಿಹೋಗುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೬ ಗಂಟೆಯೆಂದು ಹೇಳಬಹುದು. ಸಾಂಖಸ್ ಒಲೆರೇಸಿಯಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ಸೋವ್ ತಿಸ್ಸಿಲ್ ಎಂಬ ಆಡುಭಾಷೆಯ ಹೆಸರನ್ನೂ ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ಏಳನೆಯ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೫ ಗಂಟೆಗೆ ಅರಳಿ ೧೨ ಗಂಟೆಗೆ ಬಾಡಿಹೋಗುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೫ ಗಂಟೆಯೆಂದು ಹೇಳಬಹುದು. ಟಾರಕ್ಸೇಕಂ ಅಫ್ಫಿಸಿನೇಲ್ ವೆಬ್ಬೆರ್ಎಂಬ ಸಸ್ಯಶಾಸ್ತ್ರೀಯ ನಾಮವನ್ನು ಮತ್ತು ದಾಂಡೇಲಿಯನ್ ಎಂಬ ಆಡುಭಾಷೆಯ ನಾಮವನ್ನೂ ಹೊಂದಿರುವ ಈ ಸಸಿಯೂ,ಲಿನ್ನೇಯಸ್ ಹೂವಿನ ಗಡಿಯಾರದ ಎಂಟನೆಯ ಸದಸ್ಯ. ಈ ಸಸಿಯೂ ಮುಂಜಾನೆ ೫ ಗಂಟೆಗೆ ಅರಳಿ ೮-೯ ಗಂಟೆಗೆ ಬಾಡಿಹೋಗುತ್ತದೆ. ಹೀಗಾಗಿ ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೫ ಗಂಟೆಯೆಂದು ಹೇಳಬಹುದು. ಕ್ರೇಪಿಸ್ ಅಲ್ಫೀನಿಯ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ಹಾಕ್ಸ್ ಬಿಯರ್ಡ್ ಎಂಬ ಆಡುಭಾಷೆಯ ಹೆಸರನ್ನೂ ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ಒಂಬತ್ತನೆಯ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೫ ಗಂಟೆಗೆ ಅರಳಿ ೧೧ ಗಂಟೆಗೆ ಬಾಡಿಹೋಗುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೫ ಗಂಟೆಯೆಂದು ಹೇಳಬಹುದು. ಟ್ರಾಗಾಪೋಗನ್ ಹೈಬ್ರಿಡುಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಮತ್ತು ಗೋಟ್ಸ್ ಬಿಯರ್ಡ್ ಎಂಬ ಆಡುಭಾಷೆಯ ಹೆಸರನ್ನೂ ಹೊಂದಿರುವ ಈ ಸಸಿಯೂ, ಲಿನ್ನೇಯಸ್ ಹೂವಿನ ಗಡಿಯಾರದ ಹತ್ತನೆಯ ಸದಸ್ಯತ್ವ ಹೊಂದಿದೆ. ಈ ಸಸಿಯೂ ಮುಂಜಾನೆ ೫ ಗಂಟೆಗೆ ಅರಳಿ ೧೧ ಗಂಟೆಗೆ ಬಾಡಿಹೋಗುತ್ತದೆ. ಹೀಗಾಗಿ, ಇದರ ಅರಳುವಿಕೆಯನ್ನು ಗ್ರಹಿಸಿ ಸಮಯವನ್ನು ಸರಿಯಾಗಿ ಮುಂಜಾನೆ ೫ ಗಂಟೆಯೆಂದು ಹೇಳಬಹುದು. == ಪರಿಕಲ್ಪನೆಗೆ ಸಾಂಸ್ಕೃತಿಕ ಉಲ್ಲೇಖಗಳು == ೨೦೨೩ ರಲ್ಲಿ ಬಿಡುಗಡೆಯಾದ ಹೊರೊಲೊಜಿಯಮ್ ಫ್ಲೋರೆಯು, ಜಪಾನಿನ ಗಾಯಕ ಮತ್ತು ವರ್ಚುವಲ್ ಯೂಟ್ಯೂಬರ್ ಆದ ಕ್ಯೋ ಹನಬಸಾಮಿ ಅವರ ಚಿತ್ರದ ಹೆಸರಾಗಿದೆ. ಟೆರ್ರಿ ಪ್ರಾಚೆಟ್‌‌ರವರ ಕಾದಂಬರಿ ಥೀಫ್ ಆಫ್ ಟೈಮ್‌ನಲ್ಲಿ, ಅದೇ ಪ್ರಮೇಯವನ್ನು ಹೊಂದಿರುವ ಹೂವಿನ ಗಡಿಯಾರವನ್ನು ವಿವರಿಸಲಾಗಿದೆ. ಇದು ಕಾಲ್ಪನಿಕ ಹೂವುಗಳನ್ನು ಹೊಂದಿದೆ. ಹಾಗೂ ರಾತ್ರಿಯಲ್ಲಿ "ಪತಂಗಗಳಿಗಾಗಿ" ತೆರೆಯುತ್ತದೆ. ಆದ್ದರಿಂದ, ಈ ಹೂವುಗಳು ದಿನವಿಡೀ ಗ್ರಹಿಸುತ್ತದೆ. == ಇದನ್ನೂ ನೋಡಿ == ಹೂವಿನ ಗಡಿಯಾರ == ಉಲ್ಲೇಖಗಳು ==